ರಾಸಾಯನಿಕ ಚಿಕಿತ್ಸೆ 
ರೋಗಕ್ಕೆ ಕಾರಣವಾಗುವ ಸೂಕ್ಷ್ಮಜೀವಿಗಳ ಮೇಲೆ ನಿರ್ದಿಷ್ಟ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುವ, ರಾಸಾ ಯನಿಕಗಳನ್ನು ಉಪಯೋಗಿಸಿ ತಯಾರಿಸಿದ ಅಥವಾ ವಿಷಯಗಂತಿಯ ಅಂಗಾಂಶಗಳನ್ನು (ನಿಯೊಪ್ಲಾಸ್ಟಿಕ್ ಟಿಶ್ಯೂಸ್) ಆಯ್ಕೆಯಾನುಸಾರ ನಾಶಪಡಿಸುವ ಮದ್ದುಗಳನ್ನು ನೀಡಿ ರೋಗಿಯನ್ನು ಗುಣಪಡಿಸುವ ಸಲುವಾಗಿ ನೀಡುವ ಚಿಕಿತ್ಸೆ (ಕೀಮೊತೆರಪಿ). ರಾಸಾಯನಿಕ ಚಿಕಿತ್ಸೆಯ ಪಿತ ಎಂದೆನಿಸಿರುವ, ಜರ್ಮನಿಯ ಏಕಾಣುಜೀವಿವಿಜ್ಞಾನಿ ಪಾಲ್ ಏರ್ಲಿಕ್ (1854-1915) ಜ್ಞಾತರಾಸಾಯನಿಕ ರಚನೆ ಇರುವಂಥ ರಾಸಾಯನಿಕಗ ಳನ್ನು ಉಪಯೋಗಿಸಿ ಮದ್ದು ತಯಾರಿಸಿ ಯಶಸ್ವೀ ಚಿಕಿತ್ಸೆಯ ಬಳಿಕ ರಾಸಾಯನಿಕ ಚಿಕಿತ್ಸೆ ಎಂಬ ಅರ್ಥದ ಶಬ್ದವನ್ನು ರೂಪಿಸಿದ (1913). ಈ ಮದ್ದುಗಳು ಕ್ರಿಮಿಗಳ ಬೆಳವಣಿಗೆಯನ್ನು ತಡೆಗಟ್ಟುತ್ತವೆ ಇಲ್ಲವೆ ಅವನ್ನು ಸಂಪೂರ್ಣವಾಗಿ ನಾಶಮಾಡುತ್ತವೆ. ಪರೋಪಜೀವಿಗಳ ನಾಶದಲ್ಲಿಯೂ ತೀವ್ರವಾಗಿ ಉಲ್ಬಣಗೊಳ್ಳುವ ವ್ಯಾಧಿಗಳಲ್ಲೂ ಈ ಮದ್ದುಗಳು ಬಲು ಉಪಕಾರಿಗಳಾಗಿವೆ. ಇವು ಚಿಕಿತ್ಸೆ ಪಡೆಯುವವರ ಮೇಲೆ ಯಾವ ಬಾಧಕ ಪರಿಣಾಮವನ್ನು ಉಂಟುಮಾಡುವುದಿಲ್ಲ. ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ (ಗುಟ್ಟಿ-ಡೋಸ್) ಮದ್ದುಗಳನ್ನು ತೆಗೆದುಕೊಂಡರೆ ಇಲ್ಲವೆ ಸೇವಿಸಿದರೆ ಕೆಲವೊಮ್ಮೆ ಪ್ರತಿಕೊಲ ಪರಿಣಾಮಗಳೂ ಏರ್ಪಡಬಹುದು.

ರಾಸಾಯನಿಕ ಚಿಕಿತ್ಸೆಯ ಮೂರು ವಿಧಗಳು 

1. ಪ್ರಯೋಗಾನುಭವ ದಿಂದ ಚಿಕಿತ್ಸೆ: ಬಹಳ ಹಿಂದೆ ಚೀನೀಯರು ಹುಣ್ಣುಗಳ ಚಿಕಿತ್ಸೆಯಲ್ಲಿ ಮೊಸರನ್ನು ನೆಲದ ಮೇಲ್ಮಣ್ಣಿನ ಜೊತೆ ಕಲಸಿ ಲೇಪ ಹಚ್ಚುತ್ತಿದ್ದುದು ತಿಳಿದುಬಂದಿದೆ. ಭಾರತೀಯರು ಕುಷ್ಠರೋಗಕ್ಕೆ ಚೆಲ್‍ಮೂಗ್ರ ತೈಲ ಹಚ್ಚಿ ಚಿಕಿತ್ಸೆ ನೀಡುತ್ತಿದ್ದರು. ಉತ್ತರ ಮೆಕ್ಸಿಕೋದ ಅeóïಟಿಕ್ ಜನಾಂಗ ಕರುಳಿನಲ್ಲಿ ಸೇರಿರುವ ಪರೋಪಜೀವಿಗಳನ್ನು ನಾಶಪಡಿಸಲು ಚಿನಪೋಡಿಯಮ್ ಎಣ್ಣೆ ಬಳಸುತ್ತಿದ್ದರು. ಪಾರಾಸೆಲ್‍ಸಸ್ (1493-1591) ಎಂಬಾತ ಪಾದರಸದಿಂದ ಉಪದಂಶ ರೋಗವನ್ನು ಗುಣಪಡಿಸುತ್ತಿದ್ದ. ಮಲೇರಿಯ ರೋಗ ನಿವಾರಣೆಗೆ ಸಿಂಕೋನ ಚೆಕ್ಕೆಯ ಕಷಾಯ 17ನೆಯ ಶತಮಾನದಲ್ಲಿ ಪ್ರಚಲಿತವಿತ್ತು.

2. ವೈಜ್ಞಾನಿಕ ಚಿಕಿತ್ಸೆ: ಬಣ್ಣಗಳ ಮತ್ತು ದೇಹಕ್ಕೆ ಒಗ್ಗುವ ಲೋಹಮಿಶ್ರಣಗಳ ಬೆಳೆವಣಿಗೆ ಸ್ಥಿತಿಯನ್ನು ಆಧರಿಸಿದ ಚಿಕಿತ್ಸೆ ಇದು. 19ನೆಯ ಶತಮಾನದ ಕೊನೆ ದಶಕದಲ್ಲಿ ಬಳಕೆಗೆ ಬಂದಿತು. ಆ ವೇಳೆಗೆ ವ್ಯಾಧಿಕಾರಕ ಕ್ರಿಮಿಗಳನ್ನು ಪತ್ತೆ ಮಾಡಲಾಗಿತ್ತು. ಪಾಲ್ ಏರ್ಲಿಕ್ (1854-1915) ಕೆಲವು ಬಣ್ಣದ್ರವ್ಯಗಳನ್ನು ಉಪಯೋಗಿಸಿ ಅವು ಕ್ರಿಮಿದೇಹದಲ್ಲಿ ಸೇರುವಂತೆ ಮಾಡಿ, ಕೊನೆಗೆ ಆ ಬಣ್ಣಗಳೇ ಅವಕ್ಕೆ ವಿಷವಾಗಿ ಪರಿಣಮಿಸುವುದನ್ನು ನಿರೂಪಿಸಿದ. ಇವು ಮೆಥೀಲೀನ್ ಬ್ಲೂ ಮತ್ತು ಟ್ರಿಪಾನ್ ರೆಡ್. ತಾಳಕದ (ಆರ್ಸೆನಿಕ್) ಮದ್ದುಗಳನ್ನು ಬಳಸಿ ತಯಾರಿಸಿದ ಅಟಾಕ್ಸಿಲ್ ಎಂಬ ಔಷಧವನ್ನು ನಿದ್ದೆ ಬೇನೆಗೂ (ಸ್ಲೀಪಿಂಗ್ ಸಿಕ್‍ಸೆಸ್) ಆರ್ಸಿಫಿನಾಮಿನ್ ಮತ್ತು ನಿಯೊಆರ್ಸಿಫಿನಾಮಿನ್ ಮದ್ದುಗಳನ್ನು ಪರಂಗೀ ರೋಗಕ್ಕೂ (ಗೊನೇರಿಯ) ಉಪಯೋಗಿಸುತ್ತಿದ್ದರು (1909ರ ಅಂದಾಜು).

3. ಆಧುನಿಕ ಚಿಕಿತ್ಸೆ: ಇದರ ರೀತ್ಯ ಜರ್ಮನಿಯ ಜೀವರಸಾಯನ ವಿಜ್ಞಾನಿ ಗೆರ್ಹಾರ್ಡ್ ಡೊಮಾಕ್ (1895-1964) ಎಂಬಾತ ಸಲ್ಫನಿಲ ಮೈಡ್ ಎಂಬ ರಾಸಾಯನಿಕವನ್ನು ಒಳಗೊಂಡಿರುವ ಪ್ರಾಂಟೋಸಿಲ್ ಎಂಬ ಕಿತ್ತಲೆ-ಕೆಂಪು ವರ್ಣದ್ರವ್ಯವನ್ನು ಕೀವು ಉತ್ಪನ್ನ ಮಾಡುವ ಕ್ರಿಮಿಗಳ ಸೋಂಕಿನ ಸಂದರ್ಭದ ರೋಗನಿವಾರಣೆಗಾಗಿ ಉಪಯೋಗಿ ಸಿದ(1935).
ಪಾರಾಅಮೈನೋಬೆನ್‍ಜಿûೀನ್ ರಚನೆ ಇರುವ ರಾಸಾಯನಿಕಯುಕ್ತ ಔಷಧಗಳನ್ನು ಉಪಯೋಗಿಸಿದರೆ ಕ್ರಿಮಿಗಳು ನಾಶಹೊಂದುತ್ತವೆ ಎಂಬುದನ್ನು ಕಂಡುಹಿಡಿದು  ಒ & ಃ 693, ಸಲ್ಫೋನಮೈಡ್ ಎಂಬ ಮದ್ದನ್ನು 1938ರಲ್ಲಿ ತಯಾರಿಸಿ ಚಿಕಿತ್ಸೆಗೆ ಬಳಸಲಾಯಿತು. ಫ್ರೆಂಚ್ ಜೀವವಿಜ್ಞಾನಿ ಲೂಯಿ ಪ್ಯಾಸ್ಚರ್ (1822-95, (ನೋಡಿ- ಪಾಸ್ತರ್,-ಲೂಯಿ)) ಮೂತ್ರದಲ್ಲಿಯ ಆಂತ್ರಾಕ್ಸ್ ಕ್ರಿಮಿಗಳ ಬೆಳೆವಣಿಗೆಯನ್ನು ಕ್ರಿಮಿನಾಶಕದ್ರವ್ಯಗಳಿಂದ ನಿಲ್ಲಿಸಿದ (1877). ಸ್ಕಾಟ್ಲೆಂಡಿನ ಏಕಾಣುಜೀವಿ ವಿಜ್ಞಾನಿ ಅಲೆಕ್ಸಾಂಡರ್ ಫ್ಲೆಮಿಂಗ್ (1881-1955, (ನೋಡಿ- ಫ್ಲೆಮಿಂಗ್,-ಅಲೆಕ್ಸಾಂಡರ್)) ಎಂಬಾತ ಪೆನಿಸಿಲಿನ್ ಔಷಧಿ ತಯಾರಿಸಿ (1928) ಅನೇಕ ರೋಗಗಳನ್ನು  ಸೋಂಕು ಆಗದಂತೆ ಗುಣಪಡಿಸಿದ. ವಾಕ್ಸ್‍ಮನ್ ಎಂಬವ 1944ರಲ್ಲಿ ಸ್ಟ್ರೆಪ್ಟೊಮೈಸಿನ್ ಉಪಯೋಗಿಸಿ ಕ್ಷಯದ ಕ್ರಿಮಿಗಳನ್ನು ನಾಶಮಾಡಿ ರೋಗಕ್ಕೆ ಚಿಕಿತ್ಸೆ ನಡಿಸಿದ. ಬಳಿಕ ಟಿಟ್ರಸೈಕ್ಲಿನ್, ಕ್ಲೋರಂಫೆüನಿಕಾಲ್, ಎರಿಥ್ರೋಮೈಸಿನ್ ಮುಂತಾದ ಔಷಧಗಳು ತಯಾರಾದುವು. ರಾಸಾಯನಿಕ ಚಿಕಿತ್ಸಾವಿಧಾನದಲ್ಲಿ ವಿಶೇಷ ಅಧ್ಯಯನ ಸಂಶೋಧನೆಗಳನ್ನು ನಡೆಸಿ ಯುಗಪ್ರವರ್ತಕ ಕೆಲಸ ಮಾಡಿದ ಡೊಮಾಕ್, ಫ್ಲೆಮಿಂಗ್, ಜೈನ್-ಫ್ಲೋರಿ ಮತ್ತು ವಾಕ್ಸ್‍ಮನ್ ಇವರೆಲ್ಲರಿಗೂ ನೊಬೆಲ್ ಪಾರಿತೋಷಿಕ (1945) ನೀಡಲಾಯಿತು. 			
(ಎ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ